Shakti Yojana Karnataka Rules : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ನಿಮಗೆಲ್ಲರಿಗೂ ತಿಳಿದಿರುವಂತೆ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಅವುಗಳಲ್ಲಿ ಮಹಿಳೆಯರು ಕೆಎಸ್ಆರ್ಟಿಸಿ ( KSRTC ) ಬಸ್ಸುಗಳಲ್ಲಿ ಓಡಾಡುವಂತಹ ಶಕ್ತಿ ಯೋಜನೆ (Shakti Yojana)ಗೆ ಈಗ ಒಂದು ವರ್ಷ ಆಗಿದೆ ಅಂತ ಹೇಳಬಹುದು.
ಈ ಯೋಜನೆಯ ಮೂಲಕ ಕೆಎಸ್ಆರ್ಟಿಸಿ ( KSRTC Rules)ಯ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಯಾವುದೇ ಸ್ಥಳಕ್ಕೆ ಬೇಕಾದರೂ ಕೂಡ ಸಹ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿದೆ. ಆದರೆ ಈಗ ಒಂದು ವರ್ಷ ಆದತ ಬೆನ್ನಲಿ ಈ ಯೋಜನೆಯಲ್ಲಿ ಕೆಲವೊಂದು ಹೊಸ ನಿಯಮಗಳನ್ನು ಕೂಡ ಜಾರಿಗೆ ತರಲಾಗಿದ್ದು ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಈ ಲೇಖನವನ್ನು ಓದಿ ತಿಳಿದುಕೊಳ್ಳಿ.
Table of Contents
Shakti Yojana Karnataka Rules | ಶಕ್ತಿ ಯೋಜನೆ

Shakti Yojana Karnataka KSRTC New 6 Rules | ಉಚಿತವಾಗಿ ಬಸ್ ಪ್ರಯಾಣ
ಮಹಿಳಾ ಪ್ರಯಾಣಿಕರಿಗೆ ಉಚಿತವಾದ ಪ್ರಯಾಣವನ್ನು ಸರ್ಕಾರಿ ಬಸ್ಸುಗಳಲ್ಲಿ ನೀಡಿರಲಾಗುತ್ತದೆ ನಿಜ ಆದರೆ ಅವರು ಲಗೇಜ್ ಅನ್ನು ಇಂತಿಷ್ಟೇ ತರಬೇಕು ಎನ್ನುವಂತಹ ನಿಯಮಗಳನ್ನು ಕೂಡ ಸಹ ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿರುತ್ತದೆ. ಹೀಗಾಗಿ ಅವರಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವತ ಸಂದರ್ಭದಲ್ಲಿ ಇಂತಿಷ್ಟು ತೂಕವನ್ನು ಹೊಂದಿರುವಂತಹ ಲಗೇಜ್ ಗಳನ್ನು ಮಾತ್ರ ಉಚಿತವಾಗಿ ತೆಗೆದುಕೊಂಡು ಹೋಗಬಹುದು ಉಳಿದ ತೂಕಕ್ಕೆ ಶುಲ್ಕವನ್ನು ಕಟ್ಟಬೇಕಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.
ಉಚಿತ ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಜೊತೆಗೆ ಯಾವುದೇ ರೀತಿ ಕಿರಿಕಿರಿ ಅಥವಾ ಸಮಸ್ಯೆಗಳನ್ನು ಉದ್ಭವ ಆಗುವ ರೀತಿಯಲ್ಲಿ ನಡೆದುಕೊಳ್ಳುವ ಹಾಗೆ ಇಲ್ಲ ಎನ್ನುವಂತಹ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಮಹಿಳೆಯ ಪ್ರಯಾಣ ಸುಗಮವಾಗಬೇಕು ಅಂತ ಎನ್ನುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಈ ನಿಯಮವನ್ನ ಜಾರಿಗೆ ತಂದಿದೆ ಎಂದು ಹೇಳಬಹುದು .
ಶಕ್ತಿ ಯೋಜನೆಗೆ ಬಂತು ಹೊಸ 6 ರೂಲ್ಸ್.!
ನಿಮಗೆಲ್ಲರಿಗೂ ತಿಳಿದಿರಬಹುದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದ ನಂತರ ಪುರುಷರಿಗೆ 50 ಪ್ರತಿಶತ ಬಸ್ ನಲ್ಲಿ ಸೀಟಿಂಗ್ ವ್ಯವಸ್ಥೆಯನ್ನು ನೀಡಬೇಕು ಎನ್ನುವಂತಹ ನಿಯಮಗಳು ಈ ಹಿಂದೆ ಜಾರಿಗೆ ತರಲಾಗಿತ್ತು ಆದರೆ ಈಗ ಮಹಿಳೆಯರು ಪುರುಷರ ಸೀಟ್ನಲ್ಲಿ ಕೂಡ ಸಹ ಕೂರಬಹುದಾಗಿದೆ.
ಹಾಗೂ ಮಹಿಳೆಯರ ಸೀಟ್ನಲ್ಲಿ ಪುರುಷರು ಕೂತರೆ ಇನ್ನೂರು ರೂಪಾಯಿಗಳ ದಂಡಗಳನ್ನು ಕಟ್ಟಬೇಕಾಗುತ್ತದೆ ಎನ್ನುವಂತಹ ನಿಯಮವನ್ನು ಸಹ ಕೂಡ ಜಾರಿಗೆ ತರಲಾಗಿದ್ದು ತದ್ವಿರುದ್ಧವಾಗಿ ಮಹಿಳೆಯರಿಗೆ ಪುರುಷರ ಸೀಟ್ನಲ್ಲಿ ಕುಳಿತುಕೊಂಡರೆ ಯಾವುದೇ ರೀತಿಯ ಶುಲ್ಕ ಇಲ್ಲ. ಈ ನಿಯಮವನ್ನ ಪುರುಷರ ಸೀಟು ಭರ್ತಿಯಾಗದೆ ಇದ್ದಲ್ಲಿ ಮಾತ್ರ ಎಂಬುದಾಗಿ ಹೇಳಬಹುದಾಗಿದೆ. ಎಲ್ಲಾ ನಿಯಮಗಳನ್ನು ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ ಪ್ರಯಾಣ ಮಾಡುವ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುವುದು ತುಂಬಾ ಅತ್ಯಗತ್ಯವಾಗಿದೆ.
ಶಕ್ತಿ ಯೋಜನೆ (Shakti Yojane)ಯ ಮೂಲಕ ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರು ಸಾರಿಗೆ ಇಲಾಖೆ ಜಾರಿಗೆ ತಂದಿರುವಂತಹ ಈ ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಉತ್ತಮ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು