ಸ್ವಂತ ಉದ್ಯೋಗಕ್ಕೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ! 50% ಸಬ್ಸಿಡಿ ಸಿಗುತ್ತೆ! ಹೀಗೆ ಅರ್ಜಿ ಸಲ್ಲಿಸಿ karnataka udyogini loan scheme 2025

Spread the love
WhatsApp Group Join Now
Telegram Group Join Now

karnataka udyogini loan scheme 2025:-ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಮತ್ತು ಸ್ವಯಂ ಉದ್ಯೋಗ ಮಾಡಲು ಬಯಸುವಂತಹ ಎಲ್ಲಾ ಮಹಿಳೆಯರಿಗೆ ರಾಜ್ಯ ಸರ್ಕಾರದ ಕಡೆಯಿಂದ ಈ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸುಮಾರು 3 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ಸಿಗುತ್ತದೆ ಇದರ ಜೊತೆಗೆ ಸಾಮಾನ್ಯ ವರ್ಗದ ಮಹಿಳೆಯರಿಗೆ ಶೇಕಡ 30ರಷ್ಟು ಸಬ್ಸಿಡಿ ಸಿಗುತ್ತೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.50ರಷ್ಟು ಅಥವಾ ಗರಿಷ್ಠ 1,50,000 ರೂ.ಗಳವರೆಗೆ ಸಬ್ಸಿಡಿಯನ್ನು ಸಿಗುತ್ತೆ. ಹಾಗಾಗಿ ನಾವು ಈ ಯೋಜನೆಗೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ ತಿಳಿದುಕೊಳ್ಳಿ

ಸ್ವಂತ ಉದ್ಯೋಗಕ್ಕೆ ಸಿಗಲಿದೆ 3 ಲಕ್ಷ ಬಡ್ಡಿ ರಹಿತ ಸಾಲ! 50% ಸಬ್ಸಿಡಿ ಸಿಗುತ್ತೆ! ಹೀಗೆ ಅರ್ಜಿ ಸಲ್ಲಿಸಿ karnataka udyogini loan scheme 2025

ಹೌದು ನಿರುದ್ಯೋಗಿ ಮಹಿಳೆಯರಿಗಾಗಿ ಸ್ವಯಂ ಉದ್ಯೋಗ ಹೊಂದಲು ನೆರವಾಗಲು ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆ ಜಾರಿ ಮಾಡಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದು, ಸಾಲ ಸೌಲಭ್ಯ ಒದಗಿಸುತ್ತಿದೆ.

karnataka udyogini loan scheme 2025 ಉದ್ಯೋಗಿನಿ ಯೋಜನೆ 2025

ಹೌದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಲು ನೆರವಾಗುವುದೇ ಈ ಯೋಜನೆಯ ಮುಖ್ಯ ಉದ್ದೇಶ ಆಗಿದೆ.

ಉದ್ಯೋಗಿನಿ ಯೋಜನೆಯಡಿಯಲ್ಲಿ, ಮಹಿಳೆಯರು ಬ್ಯಾಂಕ್‌ಗಳಿಂದ ರೂ.1.00 ಲಕ್ಷದಿಂದ ರೂ.3.00 ಲಕ್ಷದವರೆಗೆ ಸಾಲವನ್ನು ಪಡೆಯಬಹುದು, ಇದಕ್ಕಾಗಿ ಸಾಮಾನ್ಯ ಮತ್ತು ವಿಶೇಷ ವರ್ಗದ ಮಹಿಳೆಯರಿಗೆ 30% ಸಬ್ಸಿಡಿ ಮತ್ತು ಎಸ್‌ಸಿ / ಎಸ್‌ಟಿ ವರ್ಗದ ಮಹಿಳೆಯರಿಗೆ 50% ಸಬ್ಸಿಡಿ ಸಹ ಕೂಡ ಸಿಗುತ್ತೆ.

ಎಲ್ಲಾ ಮಹಿಳೆಯರು ವ್ಯಾಪಾರ ಮತ್ತು ಸೇವಾ ಕ್ಷೇತ್ರಗಳಲ್ಲಿ ಸ್ವ-ಉದ್ಯೋಗ ಪ್ರಾರಂಭಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ಅನುಕೂಲ ಮಾಡಿದೆ.

ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುವ ಮಹಿಳೆಯರಿಗೆ ಬ್ಯಾಂಕ ನ ಮೂಲಕ ಸಾಲ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಹಾಯಧನವನ್ನು (Backend Subsidy) ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದು

ಉದ್ಯೋಗಿನಿ ಯೋಜನೆಯ ಪ್ರಯೋಜನಗಳು? Benefits of the Udyogini Scheme?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ, ಘಟಕ ವೆಚ್ಚ ಕನಿಷ್ಠ 1 ಲಕ್ಷ ರೂ. ನಿಂದ ಗರಿಷ್ಠ 3 ಲಕ್ಷ ರೂ. ವರೆಗೆ ಇರುತ್ತದೆ. ಸಬ್ಸಿಡಿ ಸಾಲದ ಮೊತ್ತದ 50%, ಸಾಲ ಪಡೆಯಲು ಕುಟುಂಬದ ಆದಾಯ ಮಿತಿ ವರ್ಷಕ್ಕೆ 2 ಲಕ್ಷ ರೂ.ಗಿಂತ ಕಡಿಮೆ ಇರಬೇಕಗುತ್ತೆ.

ವಿಶೇಷ ವರ್ಗ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಗರಿಷ್ಠ ಘಟಕ ವೆಚ್ಚ 3 ಲಕ್ಷ ರೂ. ವಿಶೇಷ ವರ್ಗದ ಮಹಿಳೆಯರಿಗೆ ಮತ್ತು ಆಯ್ದ ಫಲಾನುಭವಿಗಳಿಗೆ EDP ತರಬೇತಿಯೊಂದಿಗೆ ಸಾಮಾನ್ಯ ವರ್ಗದ ಮಹಿಳೆಯರಿಗೆ ಸಹಾಯಧನ 30% ಅಥವಾ ಗರಿಷ್ಠ 90,000 ರೂ. ಸಿಗುತ್ತೆ

ಅರ್ಹತೆ ಮಾನದಂಡಗಳು ಏನು?

  • ಅರ್ಜಿದಾರರು ಮಹಿಳೆಯಾಗಿರಬೇಕು
  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಒಳಗೆ ಇರಬೇಕು.
  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕಗುತ್ತೆ.
  • ಸಾಮಾನ್ಯ ಮತ್ತು ವಿಶೇಷ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಅರ್ಜಿದಾರರ ಕುಟುಂಬದ ಆದಾಯ ₹ 1,50,000/- ಕ್ಕಿಂತ ಕಡಿಮೆ ಇರಬೇಕಗುತ್ತೆ.
  • ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯದ ಮಿತಿಯಿಲ್ಲ .
  • ಯಾವುದೇ ಹಣಕಾಸು ಸಂಸ್ಥೆಯಲ್ಲಿ ಈ ಹಿಂದೆ ಪಡೆದ ಯಾವುದೇ ಸಾಲವನ್ನು ಮರುಪಾವತಿಸದೇ ಬಾಕಿ ಇಟ್ಟಿರಬಾರದು.

ಅಗತ್ಯ ದಾಖಲೆಗಳು ಯಾವುವು?

  • ಜಾತಿ/ಆದಾಯ ಪ್ರಮಾಣ ಪತ್ರ
  • ಬಿಪಿಎಲ್‌ ಕಾರ್ಡ್
  • ಆಧಾರ್‌ ಕಾರ್ಡ್
  • ಶಾಲಾ ವರ್ಗಾವಣೆ ಪತ್ರ
  • ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ
  • ಯೋಜನಾ ವರದಿ
  • ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿಯೊಂದಿಗೆ (ಮೊದಲನೇ ಹಾಗೂ ಕೊನೆಯ ಪುಟ) ಅರ್ಜಿ ಸಲ್ಲಿಸಬಹುದಾಗಿದೆ

ವಿಧವೆ, ಅಂಗವಿಕಲರು, ಸಂಕಷ್ಟಗೊಳಗಾದ ಮಹಿಳೆಯರು ತಮ್ಮ ಅರ್ಜಿಯೊಂದಿಗೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

ಅರ್ಹ ಮಹಿಳೆಯರು ಆಯಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

Karnataka Udyogini Scheme ಯಾವ ಉದ್ಯಮಗಳಿಗೆ ಸಾಲ ಪಡೆಯಬಹುದು?

ಈ ಉದ್ಯಮಗಳಿಗೆ ಸಾಲ ಪಡೆಯಬಹುದು ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಅಗರಬತ್ತಿ, ಕಾಫಿ -ಟೀ ಅಂಗಡಿ, ಟೈಲರಿಂಗ್, ಎಸ್‌ಟಿಡಿ ಬೂತ್‌, ಬ್ಯೂಟಿ ಪಾರ್ಲರ್‌, ಅಗರಬತ್ತಿ, ಕ್ಲಿನಿಕ್‌, ಜಿಮ್‌, ಸಿಹಿ ಅಂಗಡಿ, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದೆ.

Udyogini Scheme 2025 ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಉದ್ಯೋಗಿನಿ ಯೋಜನೆಗೆ ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡೂ ವಿಧಾನದಿಂದ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.

ಆನ್ಲೈನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

Back To Home;  click here

ವಿಶೇಷ ಸೂಚನೆ:-ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ

WhatsApp Group Join Now
Telegram Group Join Now

Leave a Comment