Govt Hostel Admission Application 2024 : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಅರ್ಜಿಯು ಆಹ್ವಾನಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.
ರಾಜ್ಯದ ಎಲ್ಲ ಜಿಲ್ಲೆ ತಾಲ್ಲೂಕುಗಳಲ್ಲಿ ಇರುವ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿವೆ. ಈ ಹಾಸ್ಟೆಲ್‌ಗಳಲ್ಲಿ ಪ್ರವೇಶವನ್ನು ಪಡೆಯುವ ಮೂಲಕ ಅರ್ಹ ವಿದ್ಯಾರ್ಥಿಗಳು ಉಚಿತ ಊಟೋಪಚಾರ ಸಹಿತ ವಸತಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ರಾಜ್ಯದ ವಿವಿಧ ಜಿಲ್ಲೆ ತಾಲ್ಲೂಕುವಾರು ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಇರಬೇಕಾದ ಅರ್ಹತೆ ಏನು, ಸಲ್ಲಿಸಬೇಕಾದ ದಾಖಲೆಗಳು ಯಾವುದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ ತಿಳಿದುಕೊಳ್ಳಿ
Table of Contents
Govt Hostel Admission Application 2024 ಯಾರೆಲ್ಲ ಅರ್ಜಿ ಸಲ್ಲಿಸಬಹುದು?
![ಹಾಸ್ಟೆಲ್ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಡೈರೆಕ್ಟ್ ಲಿಂಕ್ ಇಲ್ಲಿದೆ.! Govt Hostel Admission Application 2024 FREE](https://kannadasamachara.in/wp-content/uploads/2024/07/kNqusfbIp60hd-1-1200x675.jpg)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಿದ್ದು: ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಇತರ ವರ್ಗಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಕುಟುಂಬ ಆದಾಯ ಮಿತಿ
ಮೇಲ್ಕಂಡ ಪ್ರವರ್ಗಗಳ ವಿದ್ಯಾರ್ಥಿಗಳ ಕುಟುಂಬಗಳಿಗೆ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿದ್ದು; ಪ್ರವರ್ಗ-1ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ಮಿತಿಯಲ್ಲಿರಬೇಕು.
ಇತರ ವರ್ಗಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 44,500 ರೂಪಾಯಿ ಮಿತಿಯೊಳಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಎಸ್‌ಎಸ್‌ಪಿ ವಿದ್ಯಾರ್ಥಿ ಐಡಿ ಬೇಕು
- ಕಾಲೇಜು ನೋಂದಣಿ ಸಂಖ್ಯೆ ಬೇಕು
- ಕಾಲೇಜು ಅಧ್ಯಯನ ಪ್ರಮಾಣಪತ್ರ ಬೇಕು
- ಅಂಕ ಪಟ್ಟಿ ಬೇಕು
- ವಿದ್ಯಾರ್ಥಿ ವಿಳಾಸ ಬೇಕು
- ಆದಾಯ ಆರ್‌ಡಿ ಸಂಖ್ಯೆ ಬೇಕು
- ಜಾತಿ ಆರ್‌ಡಿ ಸಂಖ್ಯೆ ಬೇಕು
- ಮೊಬೈಲ್ ನಂಬರ್ ಬೇಕು
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 10-07-2024
ರಾಜ್ಯದ ವಿವಿಧ ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ ಹಾಗೂ ವಿದ್ಯಾರ್ಥಿ ನಿಲಯದ ಪ್ರವೇಶಕ್ಕಾಗಿ ಇರಬೇಕಾದ ಅರ್ಹತೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳಿಗಾಗಿ bcwd.karnataka.gov.in/ ಗಮನಿಸಬಹುದು. ವೇಳೆ ತಾಂತ್ರಿಕ ಸಲ್ಲಿಸುವ ತೊಂದರೆಗಳಾದರೆ 8050770004 / 8050770005 ದೂರವಾಣಿ ಸಂಖ್ಯೆಯನ್ನು ಕೇಳಿ ಸಂಪರ್ಕಿಸಬಹುದು.
ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್: Apply now
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು