ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದ ಸಹಾಯಧನ.! ಈ 4 ದಾಖಲೆ ಇದ್ದರೆ ಸಾಕು ಅರ್ಜಿ ಹಾಕಿ.! 3.5 ಲಕ್ಷ ಹಣ ಫ್ರೀ.! Free borewell drilling

Spread the love
WhatsApp Group Join Now
Telegram Group Join Now

free borewell drilling: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೈತರು ಈ ದೇಶದ ಬೆನ್ನೆಲುಬು ಎಂದು ಹೇಳಾಲಾಗುತ್ತದೆ. ಆರ್ಥಿಕತೆಯ ಕೃಷಿ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದಷ್ಟು ದೇಶದ ಏಳಿಗೆಯೂ ಆಗುತ್ತದೆ. ಆಹಾರ ಪೂರೈಕೆಯ ಉದ್ದೇಶದಿಂದ ಕೂಡ ಇದಕ್ಕೆ ಪ್ರಥಮ ಆದ್ಯತೆಯಾಗಿ ಕಾಣಲೇಬೇಕು. ನಮ್ಮ ದೇಶವು ಮೂಲತಃ ಹಳ್ಳಿಗಳ ದೇಶವಾಗಿದೆ ದೇಶದಲ್ಲಿ ಅನೇಕ ಜನರು ಶೇಕಡವಾರು ಅವರ ಜೀವನೋಪಾಯಕ್ಕಾಗಿ ಕೃಷಿಯನ್ನು ಅನುಸರಿಸಿದ್ದಾರೆ.

ಹಾಗೆಯೇ ನಮ್ಮ ದೇಶದಲ್ಲಿ ಕೃಷಿಗೆ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಭಾರತದಲ್ಲಿನ ವ್ಯವಸಾಯವು ಮಳೆ ಜೊತೆ ಆಡುವ ಜೂಜಾಟ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ ಹಾಗಾಗಿ ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ದೇಶವನ್ನು ಆರ್ಥಿಕವಾಗಿ ಸದೃಢನಾಗಿ ಮಾಡುವ ಮತ್ತು ರೈತರ ಆದಾಯ ಹೆಚ್ಚಿಸುವ ಕಾರ್ಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತಿವೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ರೈತರಿಗಾಗಿ ಅನೇಕ ಸಬ್ಸಿಡಿ ಸಹಾಯಧನದ ಯೋಜನೆಗಳನ್ನು ಜಾರಿ ಗುಡಿಸಿದ್ದಾರೆ ಅದರ ಪ್ರಯೋಜನಗಳು ರೈತರಿಗೆ ದೊರೆಯುತ್ತಿವೆ. ಪ್ರಧಾನ ಮಂತ್ರಿ ಮತ್ತು ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕಿಸಾನ್ ಮನ್ ಧನ್ ಯೋಜನೆ, ಬಡ್ಡಿ ರಹಿತ ಕೃಷಿ ಸಾಲ, ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ರಸಗೊಬ್ಬರಗಳ ವಿತರಣೆ, ಗಂಗಾ ಕಲ್ಯಾಣ ಯೋಜನೆ ಮೂಲಕ ಉಚಿತವಾಗಿ.

free borewell drilling ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದ ಸಹಾಯಧನ.! ಈ 4 ದಾಖಲೆ ಇದ್ದರೆ ಸಾಕು ಅರ್ಜಿ ಹಾಕಿ.!

free borewell drilling ಉಚಿತ ಬೋರ್ವೆಲ್ ಕೊರೆಸಲು ಸರ್ಕಾರದ ಸಹಾಯಧನ.! ಈ 4 ದಾಖಲೆ ಇದ್ದರೆ ಸಾಕು ಅರ್ಜಿ ಹಾಕಿ.! 3.5 ಲಕ್ಷ ಹಣ ಫ್ರೀ.!

ನೀರಾವರಿ ಸೌಲಭ್ಯ ಮತ್ತು ಕೃಷಿಗೆ ಹೊಂದಿಕೊಂಡಂತಹ ಉಪ ಕಸುಬುಗಳಾದ ಹೈನುಗಾರಿಕೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ, ಕುರಿ ಕೋಳಿ ಮೇಕೆ ಸಾಕಾಣಿಕೆ ಇತ್ಯಾದಿಗಳಿಗೆ ಸರ್ಕಾರದಿಂದ ಸಹಾಯ ಸಿಗುತ್ತಿರುವುದು . ಇವುಗಳಲ್ಲಿ ಗಂಗಾ ಕಲ್ಯಾಣ ಯೋಜನೆ ಬಹಳ ವಿಶೇಷ ಎನ್ನಬಹುದಾಗಿದೆ ಯಾಕೆಂದರೆ ಮಳೆ ರೈತರಿಗೆ ಸರಿಯಾದ ಸಮಯಕ್ಕೆ ಬರದ ಕಾರಣ ಆಶ್ರಿತ ಭೂಮಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಆಯ್ದ ಕೆಲ ವರ್ಗಗಳ ಕುಟುಂಬದ ರೈತನಿಗೆ ತನ್ನ ಜಮೀನಲ್ಲಿ ಉಚಿತವಾಗಿ ಬೋರ್ವೆಲ್ ಕೊರೆಸಿ ಕೊಡುವ ಯೋಜನೆ ಇದಾಗಿದೆ.

ಈ ಮೇಲೆ ಹೇಳಿದಂತೆ ವ್ಯವಸಾಯ ಕ್ಷೇತ್ರಕ್ಕೆ ಮಳೆ ಜೊತೆ ಎದುರಾಗುವ ಸವಾಲುಗಳನ್ನು ಎದುರಿಸಲು ನೀರಿನ ಅನುಕೂಲತೆಯ ಅವಶ್ಯಕತೆ ಇರುತ್ತದೆ ಆದರೆ ಎಲ್ಲ ರೈತರಿಗೂ ಕೂಡ ಲಕ್ಷಾಂತರ ಹಣ ಖರ್ಚು ಮಾಡಿ ತಮ್ಮ ಜಮೀನಿಗೆ ಬೋರ್ವೆಲ್ ಕೊರೆಸುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆ ಮೂಲಕ ಉಚಿತವಾಗಿ ರೈತರಿಗೆ ಬೋರ್ವೆಲ್ ಕೊರಿಸಲು ಮತ್ತು ಪಂಪ್ಸೆಟ್ ಮಾಡಲು ಬೇಕಾದ ಇತರೆ ಪರಿಕರಗಳನ್ನು ಉಚಿತವಾಗಿ ನೀಡಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಪ್ರಯೋಜನ ಪಡೆಯಲು ಕಂಡಿಷನ್ ಗಳು ಏನು? ಹೇಗೆ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ನೀಡಬೇಕು? ಎನ್ನುವುದರ ವಿವರ ಇಗಿದೆ ಎಲ್ಲ ರೈತರಿಗೂ ಅನುಕೂಲ ಮಾಡಿಕೊಡುವ ಸಲುವಾಗಿ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.

ಯೋಜನೆಗೆ ಹೆಸರು:- ಗಂಗಾ ಕಲ್ಯಾಣ ಯೋಜನೆ

ಗಂಗಾ ಕಲ್ಯಾಣ ಯೋಜನೆ ಯೋಜನೆಯ ಉದ್ದೇಶ:-

ಅರ್ಹ ರೈತರ ಜಮೀನಿನಲ್ಲಿ ಉಚಿತವಾಗಿ ಬೋರ್‌ವೆಲ್‌ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದು ಮತ್ತು ಜಮೀನಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಪಂಪ್‌-ಮೋಟಾರ್‌ ಮೂಲಕ ನೀರೆತ್ತುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಲು ಇರುವ ಕಂಡಿಷನ್ ಗಳು:-

ರಾಜ್ಯದ ಆಯ್ದ ಕೆಲವು ನಿಗಮಗಳ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅವುಗಳ ಪಟ್ಟಿ ಇಂತಿದೆ:-ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

  • ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
  • ಪರಿಶಿಷ್ಟ ಜಾತಿ- ವರ್ಗಗಳ ಅಭಿವೃದ್ಧಿ ನಿಗಮ
  • ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
  • ವಿಶ್ವಕರ್ಮ ಅಭಿವೃದ್ಧಿ ನಿಗಮ
  • ಉಪ್ಪಾರ ಅಭಿವೃದ್ಧಿ ನಿಗಮ
  • ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ
  • ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
  • ಬೋವಿ ಸಮುದಾಯದ ಅಭಿವೃದ್ಧಿ ನಿಗಮ

20 ಗುಂಟೆ – 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕರೆ.

  • ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು, ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದಿರಬಾರದು
  • ರಾಜ್ಯದ ಕಾಯಂ ನಿವಾಸಿ ಆಗಿರಬೇಕು.

ಬೇಕಾಗುವ ದಾಖಲೆಗಳು:-

  • ಆಧಾರ್‌ ಕಾರ್ಡ್
  • ಪಾನ್‌ ಕಾರ್ಡ್‌
  • ಬ್ಯಾಂಕ್‌ ಪಾಸ್‌ಬುಕ್‌
  • ಜಾತಿ-ಆದಾಯ ಪ್ರಮಾಣ ಪತ್ರ
  • ರೈತನ ಭಾವಚಿತ್ರ
  • ಜಮೀನಿನ ದಾಖಲೆ

ಅರ್ಜಿ ಸಲ್ಲಿಸುವ ವಿಧಾನ:-

ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆದು ಮಾರ್ಗದರ್ಶನದೊಂದಿಗೆ ಅರ್ಜಿ ಸಲ್ಲಿಸಬಹುದು

ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಕುಟುಂಬದವರೊಂದಿಗೆ ಶೇರ್ ಮಾಡಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment