Birth certificate or death certificate download online:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ,ಮೊದಲೆಲ್ಲ ಜನ್ಮ ಪ್ರಮಾಣ ಪತ್ರ (Birth certificate) ಮತ್ತು ಮರಣ ಪ್ರಮಾಣ ಪತ್ರ (Death Certificate) ಪಡೆಯಲು ಸಾಕಷ್ಟು ತಿಂಗಳುಗಳೇ ಬೇಕಾಗುತ್ತಿದ್ದವು. ಅಂತಹ ಸಮಸ್ಯೆಗೆ ಇದೀಗ ನಮ್ಮ ರಾಜ್ಯ ಸರ್ಕಾರ (Karnataka State Govt) ಮುಕ್ತಿ ನೀಡಿದ್ದು, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ (birth and death certificate download) ಪಡೆಯಬಹುದಾಗಿದೆ. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣವಾಗಿ ಕೊನೆವರೆಗೂ ಓದಿ ತಿಳಿದುಕೊಳ್ಳಿ
Table of Contents
ಸರ್ಕಾರಿ ಕೆಲಸಗಳು ಎಂದರೆ ತುಂಬಾ ನಿದಾನ ಎಂದು ಹಲವರು ದೂರುವುದನ್ನು ನೀವು ಕೇಳಿರಬಹುದು. ಅದು ಸತ್ಯವೂ ಹೌದು. ಯಾಕಂದರೆ ಜನ ಕಲ್ಯಾಣ ಯೋಜನೆ ಅಡಿಯಲ್ಲಿ ಬರುವ ಸಾವಿರಾರು ಅರ್ಜಿಗಳಿಗೆ ತಕ್ಕ ಉತ್ತರಗಳು ಸಿಗುವುದು ಹಲವು ದಿನಗಳ ಬಳಿಕ.ಇದಕ್ಕೆ ಪ್ರಮುಖ ಕಾರಣ ಎಂದರೆ ಸರ್ಕಾರದ ಬಳಿ ಸಾಕಷ್ಟು ಸಂಪನ್ಮೂಲದ ಕೊರತೆ. ಅದು ಸಿಬ್ಬಂದಿ ಸಮಸ್ಯೆಗಳು ಸಹ ಕೂಡ ಆಗಿರಬಹುದು ಅಥವಾ ಬಜೆಟ್ ಸಮಸ್ಯೆ ಆಗಿರಬಹುದು. ಇದರ ಕೆಟ್ಟ ಪರಿಣಾಮವನ್ನು ನಾಗರಿಕರು ನಾವು ಅನುಭವಿಸಬೇಕಾಗುತ್ತದೆ. ಇದರಿಂದ ಸರ್ಕಾರ ಅಂದುಕೊಂಡಂತೆ ಜನ ಕಲ್ಯಾಣ ಯೋಜನೆಗಳು ಯಶಸ್ವಿ ಆಗುವುದು ಇಲ್ಲಾ .
ಇಂತಹ ಹಲವು ಜನ ಕಲ್ಯಾಣ ಯೋಜನೆಗಳಲ್ಲಿ ಪ್ರಮುಖವಾದ ಸೇವೆ ಎಂದರೆ ಜನನ ಮರಣ ಪ್ರಮಾಣ ಪತ್ರ ಒದಗಿಸುವುದು. ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿನ ಜನನ ನೊಂದಣಿಯನ್ನು ಹಾಗೂ ನಿಧನ ಹೊಂದುವ ಪ್ರತಿಯೊಬ್ಬ ನಾಗರಿಕನ ಮರಣದ ನೊಂದಣಿ ಮಾಡಿಸಬೇಕಾಗುತ್ತದೆ. ಹಿಂದೆ ಹೀಗೆ ನೋಂದಣಿ ಮಾಡಿಸಿ ಜನ್ಮ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣ ಪತ್ರ (Birth certificate or death certificate download) ಪಡೆಯಲು ಸಾಕಷ್ಟುಗಳು ಸಮಸ್ಯೆಗಳಾಗುತ್ತಿದ್ದವು ನಿಮಗೆ ಕೂಡ ಗೊತ್ತಿದೆ.

Birth certificate or death certificate download online | ಜನ್ಮ ಪ್ರಮಾಣ ಪತ್ರ ಪಡೆಯುವುದು ಹೇಗೆ?
- ಹಂತ -1) ಮೊದಲಿಗೆ ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಇ-ಜನ್ಮ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- https://ejanma.karnataka.gov.in
- ಹಂತ -2) ನಂತರ ನೀವು ಜನನ ಪ್ರಮಾಣ ಬೇಕಾದರೆ Birth and Death Certificate ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಹಂತ -3) ನಂತರ ನೀವು ನಿಮ್ಮ ಜನ್ಮ ಪ್ರಮಾಣ ಪತ್ರದ ನೊಂದಣಿ ಮಾಡಿಸಿದ ನಂಬರ್ ಹಾಕಿ, ಮಗು ಜನಿಸಿದ ದಿನಾಂಕವನ್ನು ಹಾಕಿ ಕೆಳಗೆ ನೀಡಲಾಗಿರುವ ಕ್ಯಾಪ್ಚ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮಗುವಿನ ಜನನ ಪ್ರಮಾಣ ಪತ್ರ ಸಿಗುತ್ತದೆ.
ಈ ರೀತಿಯಾಗಿ ನೀವು ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ಕುಟುಂಬ ಸದಸ್ಯರ ಜನನ ಪ್ರಮಾಣ ಪತ್ರ ಅಥವಾ ಮರಣ ಪ್ರಮಾಣ ಪತ್ರವನ್ನು ಸುಲಭವಾಗಿ ನೀವು ಪಡೆಯಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು