Bara Parihara List Karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ. ರೈತರೇ ಕಳೆದ ತಿಂಗಳಿನಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬೆಳೆಹಾನಿ ಪರಿಹಾರ ಎಂದು ಬಂದಿದ್ದ 3,454 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರವು ಕಳೆದ ತಿಂಗಳು ಅರ್ಹ ರೈತರಗಳ ಖಾತೆಗೆ ನೇರವಾಗಿ ಬರ ಪರಿಹಾರ ಹಣ ( Bara Parihara hana ) ಜಮಾ ಮಾಡಿತ್ತು
Bara Parihara List Karnataka | ಬರ ಪರಿಹಾರ
ಇದೀಗ ರಾಜ್ಯ ಸರ್ಕಾರ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದ್ದು, ಕಳೆದ ತಿಂಗಳು ನೀಡಿದ್ದ ಬರ ಪರಿಹಾರ ಹಣ (Bara Parihara amount)ದ ಜೊತೆಗೆ ಹೆಚ್ಚುವರಿ 3,000 ರೂಪಾಯಿ ಹಣ ಜಮಾ ಮಾಡಿದೆ ಅಂತ ಹೇಳಬಹುದು.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಬಂದ ಅನುದಾನದಲ್ಲಿ ಬಾಕಿ ಉಳಿದಿರುವ 1000 ಕೋಟಿ ಜೊತೆಗೆ ರಾಜ್ಯ ಸರ್ಕಾರವು ತನ್ನ ಬೊಕ್ಕಸದಿಂದತ 272 ಕೋಟಿ ರೂಪಾಯಿಯನ್ನು ಸೇರಿಸಿ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹೆಚ್ಚುವರಿತ ಪರಿಹಾರವಾಗಿ 17.09 ಲಕ್ಷ ರೈತರ ಖಾತೆಗೆ ನೇರವಾಗಿ ತಲಾ 3,000 ಹಣ ಜಮಾ ಮಾಡಿದೆ.
ನಿಮ್ಮ ಖಾತೆಗೆ ಹೆಚ್ಚುವರಿ ಬರ ಪರಿಹಾರ ಹಣ ಜಮಾ ( Bara Parihara payment ) ಆಗಿದೆಯಾ ಎಂದು ಚೆಕ್ ಮಾಡಲು ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿರಿ. ಇದೇ ರೀತಿಯ ಉಪಯುಕ್ತ ಮಾಹಿತಿಯನ್ನು ಪಡೆಯಲು ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿರಿ .
Table of Contents

ಹಣ ಜಮಾ ಆಗಿದೆಯಾ ಎಂದು ಚೆಕ್ ಮಾಡುವುದು ಹೇಗೆ?
- ಹಂತ -1) ಮೊದಲಿಗೆ ನಾವು ಕೆಳಗೆ ನೀಡಲಾಗಿರುವ ರಾಜ್ಯ ಸರಕಾರದ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ .
- https://parihara.karnataka.gov.in/service89/PaymentDetailsReport.aspx
- ಹಂತ -2) ನಂತರ ಅಲ್ಲಿ ನೀವು ಮೊದಲು ವರ್ಷ ಹಾಗೂ ಋತು ಮತ್ತು ವಿಪತ್ತಿನ ವಿಧವನ್ನು ಆಯ್ಕೆ ಮಾಡಿಕೊಳ್ಳಿ . ನಂತರ ನಿಮ್ಮ ಜಿಲ್ಲೆ ಹಾಗೂ ತಾಲ್ಲೂಕು ಮತ್ತು ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ, Get Report ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಹಂತ -3) ನಂತರ ನಿಮ್ಮ ಗ್ರಾಮದಲ್ಲಿ ಯಾರೆಲ್ಲ ರೈತರಿಗೆ ಹೆಚ್ಚುವರಿ ಪರಿಹಾರವಾಗಿ 3,000 ಹಣ ಜಮಾ ಆಗಿದೆ ಅವರ ಪಟ್ಟಿ ಕಾಣಿಸುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ. ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮಗೆ ಇನ್ನೂ ಹಣವು ಜಮಾ ಆಗಿಲ್ಲ ಎಂದು ಅರ್ಥ.
ಒಂದು ವೇಳೆ ನಿಮ್ಮ ಖಾತೆಗೆ ಹೆಚ್ಚುವರಿ ಹಣ ಜಮಾ ಆಗಿಲ್ಲದಿದ್ದರೆ 2 ದಿನ ಕಾಯಿರಿ. ಏಕೆಂದರೆ ಹಣ ಜಮಾ ಮಾಡುವ ಕೆಲಸ ಇದೀಗ ಆರಂಭವಾಗಿದ್ದು 2-3 ದಿನಗಳಲ್ಲಿ ಎಲ್ಲಾ ರೈತರ ಖಾತೆಗೆ ಹಣ ಜಮಾ ಆಗುತ್ತದೆ. ಅಷ್ಟೂ ಮೀರಿ ನಿಮಗೆ ಹಣ ಜಮಾ ಆಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿಕೊಳ್ಳಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು