Bal Jeevan Bima Yojana : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪ್ರತಿಯೊಬ್ಬ ವ್ಯಕ್ತಿಯು ಇತ್ತೀಚಿನ ದಿನಗಳಲ್ಲಿ ಹೂಡಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ ಹೌದು ಇಂದು ಎಲ್ಲರೂ ದುಡಿದ ಸ್ವಲ್ಪ ಹಣವನ್ನು ಉಳಿಸಲು ಹೂಡಿಕೆ ಮಾಡಿದರೆ ಮಾತ್ರ ಮುಂದಕ್ಕೆ ನಮಗೆ ಸಹಾಯಕ ವಾಗಲಿದೆ. ಹೌದು ಕಷ್ಟ ಅಂತ ಬಂದಾಗ ಉಪಯೋಗವಾಗುತ್ತದೆ ಎಂದು ಹೂಡಿಕೆ ಹಣಯು ಹೇಳಬಹುದು ಅದರಲ್ಲು ನಿಮ್ಮ ನಿಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಕೂಡ ಅವಕಾಶ ಇರಲಿದ್ದು ಅತಿ ಕಡಿಮೆ ಮೊತ್ತ ಹೂಡಿಕೆ ಮಾಡುವುದರಿಂದ ಹೆಚ್ಚಿನ ಸಹಾಯವಾಗಬಹುದು ಈ ಮೂಲಕ ಹೆಚ್ಚು ಲಾಭ ಗಳಿಸಬಹುದು.
ಮಕ್ಕಳ ಭವಿಷ್ಯ ಅಭಿವೃದ್ಧಿ ಆಗಬೇಕೆಂದರೆ ನಮ್ಮ ಮಕ್ಕಳಿಗೆ ಯಾವುದೇ ಕಷ್ಟ ಉಂಟಾಗಬಾರದು ಎನ್ನುವುದು ಪೋಷಕರ ಆಶಯ ವಾಗಿದೆ. ಮತ್ತು ತಮ್ಮ ಮಕ್ಕಳಿಗೆ ಅವರ ಮುಂದಿನ ಜೀನದಲ್ಲಿ ಆರ್ಥಿಕವಾಗಿ ಅವರು ಸದೃಢ ವಾಗಿರಲಿ ಎಂದು ಎಲ್ಲಾ ಪೋಷಕರು ಬಯಸುತ್ತಾರೆ ಹಾಗೂ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗಬಾರದು ಎಂಬ ದೃಷ್ಟಿಯಲ್ಲಿ ಪೋಷಕರು ಅವರುಗಳ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಲು ಮುನ್ನುಗುತ್ತಾರೆ ಮತ್ತು ಇಂತಹ ಹೂಡಿಕೆ ಮಾಡುವವರಿಗೆ ಅಂಚೆ ಕಚೇರಿ (Post Office) ಹೊಸ ಹೊಸ ರೀತಿಯ ಯೋಜನೆ ಯನ್ನು ರೂಪಿಸಿದ್ದಾರೆ ಈ ಯೋಜನೆಯ ಲಾಭ ಪಡೆಯುವುದು ಒಳ್ಳೆಯ ಮಾಹಿತಿ
Table of Contents

Bal Jeevan Bima Yojana : ಮಕ್ಕಳ ಜೀವ ವಿಮಾ ಯೋಜನೆ.?
ಮಕ್ಕಳ ಸುರಕ್ಷತೆ ಹಾಗೂ ಭದ್ರತೆ ಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಪ್ರತಿ ದಿನ ನಿತ್ಯ ಕನಿಷ್ಠ ಹೂಡಿಕೆ ಮಾಡುವುದರಿಂದ ಈ ಯೋಜನೆಯ ಮೂಲಕವೇ ನೀವು ನಿಮ್ಮ ಮಕ್ಕಳ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಉಳಿತಾಯ ಮಾಡಬಹುದು. ನೀವು ಈ ಯೋಜನೆಯಲ್ಲಿ ಕನಿಷ್ಠ 6 ರೂಪಾಯಿ ಹೂಡಿಕೆಗಳನ್ನು ಮಾಡಿದರೆ ಸಾಕು, ಗರಿಷ್ಠ 3,00,000 ವರೆಗೆ ಲಾಭ ಪಡೆಯಬಹುದಾಗಿದೆ. ಇದರಲ್ಲಿ ನಿಮ್ಮ ಮಗುವಿನ ಪೋಷಕರು 5 ವರ್ಷಗಳ ಯೋಜನೆ ಪಡೆಯುತ್ತಿದ್ದರೆ ಪ್ರತಿದಿನ 18 ರೂಪಾಯಿ, ಅದೇ 20 ವರ್ಷಗಳವರೆಗಿನ ಯೋಜನೆಯನ್ನು ಪಡೆಯಲು ದಿನಕ್ಕೆ 6 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ
ಈ ನಿಯಮ ಇರಲಿದೆ | ಬಾಲ ಜೀವನ್ ಬೀಮಾ ಯೋಜನೆ
ಮಕ್ಕಳ ಜೀವ ವಿಮಾ ಯೋಜನೆಗೆ (Bal Jeevan Bima Yojana) ಇದಕ್ಕೆ ನೀವು ಅರ್ಜಿ ಹಾಕಲು ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚು ಇರಬಾರದು.ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಮಗುವಿನ ವಯಸ್ಸು(age) ಕನಿಷ್ಠ 5 ವರ್ಷಗಳು ಹಾಗೂ ಗರಿಷ್ಠ ವಯಸ್ಸು(age) 20 ವರ್ಷಗಳು ಇರಬೇಕು. ನೀವು ಏನಾದರೂ ಮಧ್ಯದಲ್ಲಿ ಪಾಲಿಸಿಯಿಂದ ಹಿಂದೆ ಸರಿಯಲು ಬಯಸಿದರೆ 5 ವರ್ಷಗಳ ನಂತರ ಸರೆಂಡರ್ ಆಗುವ ಅವಕಾಶಕೂಡ ಇರುತ್ತದೆ ಪಾಲಿಸಿದಾರರು ಅಂದರೆ ಪೋಷಕರು ಮರಣಹೊಂದಿದರೆ, ಮಕ್ಕಳ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸುವಂತೆ ನಿಯಮ ಇರುವುದಿಲ್ಲ ಹಾಗೂ. ಇದರ ಅವಧಿ ಮುಗಿದ ನಂತರ ಎಲ್ಲಾ ವಿಮಾ ಮೊತ್ತ ಮತ್ತು ಬೋನಸ್ ಹಣವನ್ನು ನಿಮ್ಮ ಮಕ್ಕಳಿಗೆ ನೀಡಲಾಗುತ್ತದೆ.
ಮಕ್ಕಳ ಜೀವ ವಿಮಾ ಯೋಜನೆ ಈ ದಾಖಲೆ ಬೇಕಾಗುತ್ತದೆ
ಈ ವಿಮೆ ಯೋಜನೆ ಯನ್ನು ಪಡೆಯಲು ಕೆಲವೊಂದು ದಾಖಲೆಗಳು ಬೇಕಾಗಿರುತ್ತದೆ
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವಿಳಾಸ ಪುರಾವೆ
- ವಯಸ್ಸಿನ ಪತ್ರ
- ಪೋಟೋ
- ಪೋಷಕರ ಆಧಾರ್ ಕಾರ್ಡ್
- ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಇತ್ಯಾದಿ ಬೇಕು.
ಬಾಲ ಜೀವನ್ ಬೀಮಾ ಯೋಜನೆಗೆ ಅರ್ಜಿ ಹಾಕಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಅರ್ಜಿ ಪಡೆದು ಕೊಂಡು ಅದರ ಲಾಭ ಪಡೆಯಿರಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು