how to download online land recordings in mobile:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, ಎಲ್ಲರಿಗೂ ತಿಳಿದಿರುವ ಹಾಗೆ , ಹೊಲದ ಯಾವುದೇ ರೀತಿಯಾದ ಮಾಹಿತಿಯನ್ನು ತಿಳಿಯಲು, ಸರ್ಕಾರದ ಪ್ರತಿಯೊಂದು ಯೋಜನೆ ಮತ್ತು ಆನ್ಲೈನ್ ಅಪ್ಲಿಕೇಶನ್ ಹಾಕಲು ಮತ್ತು ಇತರೆ ನಿಮ್ಮ ಹೊಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಿಳಿಯಲು ಹೊಲದ ಪಹಣಿ(Pahani RTC) ಬೇಕೇ ಬೇಕು.
ಹೌದು ರೈತ ಬಾಂಧವರೇ ರೈತರಿಗೆ ಸರ್ಕಾರದ ಎಲ್ಲಾ ಆ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದರೆ ಈ ಭೂ ಪತ್ರಿಕೆಯು ಮಹತ್ವವಾದತ ಪಾತ್ರವನ್ನು ಹೊಂದಿರುತ್ತದೆ. ಇದು ಆ ಹೊಲದ ಅಸಲಿ ಮಾಲಿಕನ ವಿವರವನ್ನು ತೋರಿಸುತ್ತದೆ, ಈ ಭೂ ಪತ್ರಿಕೆಯು ಪ್ರತಿಯೊಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪ್ರತಿಯೊಂದು ಯೋಜನೆಗೆ ಕಡ್ಡಾಯವಾಗಿ ಬೇಕಾದ ಪತ್ರಿಕೆ ಆಗಿದೆ ಅಂತ ಹೇಳಬಹುದು.
ಈ ಹಿಂದೆ ಈ ಹೊಲದ ಪಹಣಿ(Pahani RTC)ಯನ್ನು ತೆಗೆಯಲು ರೈತರುಗಳು ನಾಡಕಚೇರಿಗೆ ಅಥವಾ ಇತರೆ ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗಿ ಕಾದುಕೊಂಡು ಪಹಣಿಯ ಪ್ರಿಂಟ್ ಹಾಕಿಸಬೇಕಾಗಿತ್ತು, ಆದರೆ ಈಗ ಸರ್ಕಾರವು ತನ್ನದೇ ಆದಂತಹ ಅಧಿಕೃತ ವೆಬ್ ಸೈಟ್ ನಲ್ಲಿ, ರೈತ ಕೇವಲ ತನ್ನ ಊರು ತನ್ನ ಹೊಲದ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ತನ್ನ ಮೊಬೈಲ್ ನಲ್ಲಿಯೇ ತನ್ನ ಪಹಣಿ(Pahani RTC)ಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.
Table of Contents
ಈ ಪಹಣಿ ಎಂದರೇನು?

ಪಹಣಿ(Pahani RTC)ಯು ಸರ್ಕಾರ ಆದೇಶ ಪಡಿಸಿದ ಹಾಗೆ ಒಂದು ಬಹು ಮುಖ್ಯವಾದತ ದಾಖಲಾತಿ ಆಗಿದೆ . ಈ ಪಹಣಿಯಲ್ಲಿ ಹೊಲದ ಮಾಲೀಕನ ಸಂಪೂರ್ಣವಾದ ಮಾಹಿತಿಯನ್ನು ಅವನ ಆಸ್ತಿಯ ಸಂಪೂರ್ಣವಾದ ಮಾಹಿತಿ ಹೊಲದ ಸುತ್ತಮುತ್ತಲಿನ ಆಸ್ತಿಯ ವಿವರಗಳು ಈ ಪಹಣಿಯಲ್ಲಿ ಹೊಂದಿರುತ್ತದೆ.
ಈ ಪಹಣಿ ಏಕೆ ಬೇಕು ? ಪಹಣಿ ಎಲ್ಲಿ ಉಪಯೋಗವಾಗುತ್ತದೆ?
ಸ್ನೇಹಿತರೆ ಯಾವುದೇ ರೈತ ಹೊಲವನ್ನು ಖರೀದಿಸುವಾಗ ಅಥವಾ ಮಾರಾಟವನ್ನು ಮಾಡುವಾಗ ಈ ಭೂ ದಾಖಲೆಯೂ ಕಡ್ಡಾಯವಾಗಿ ಬೇಕೇ ಬೇಕಗುತ್ತೆ.ರೈತರು ತನ್ನ ಹೊಲದ ಮೇಲೆ ಯಾವುದೇ ರೀತಿಯಾದಂತಹ ಸಾಲವನ್ನು ಪಡೆಯಲು ಈ ದಾಖಲಾತಿಯು ಮುಖ್ಯ ಪಾತ್ರವನ್ನು ವಯಸ್ಸುತದೆ.ಇದು ನಿಮ್ಮ ಹೊಲದ ಮಾಲೀಕತ್ವವನ್ನು ಸ್ಪಷ್ಟಪಡಿಸುವ ಭೂ ದಾಖಲೆಯಾಗಿದೆ.
How to Download RTC Online | ಪಹಣಿ ಹೇಗೆ ಪಡೆಯುವುದು ?
ಹೌದು ಸ್ನೇಹಿತರೆ ರೈತರು ತನಗೆ ಬೇಕಾದಾಗ ತನ್ನ ಹತ್ತಿರ ಇರುವತ ಯಾವುದೇ ಕಂಪ್ಯೂಟರ್ ಸೆಂಟರ್ ಗಳಿಂದ, ಕೇವಲ 15 ರೂಪಾಯಿ ಕೊಟ್ಟು ತನ್ನ ಹೊಲದ ಪಹಣಿಯನ್ನು ಪ್ರಿಂಟ್(Pahani RTC) ತೆಗೆದುಕೊಳ್ಳಬಹುದು. ಕೇವಲ ತನ್ನ ಊರು ತನ್ನ ಗ್ರಾಮ ಹಾಗೂ ಸರ್ವೇ ನಂಬರ್ ಮೂಲಕ ಯಾವುದೇ ಕಂಪ್ಯೂಟರ್ ಸೆಂಟರ್ ನಿಂದ ಈ ಭೂ ದಾಖಲಾತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇದಲ್ಲದೆ ರೈತರು ಈಗ ತಮ್ಮ ಮೊಬೈಲ್ ನಲ್ಲೇ ಕ್ಷಣ ಮಾತ್ರದಲ್ಲಿ ತಮ್ಮ ಹೊಲದ ಪಹಣಿಯನ್ನು ತೆಗೆದುಕೊಳ್ಳಬಹುದು. ನಾವು ಹೇಳುವ ಪ್ರತಿ ಹಂತವನ್ನು ಅನುಸರಿಕೊಡು ನೀವು ಪಡೆಯಬಹುದು ಇದರಿಂದ ನೀವು ಯಾವುದೇ ಕಂಪ್ಯೂಟರ್ ಸೆಂಟರ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
how to download online land recordings in mobile 2024 | ಪಹಣಿ ಹೇಗೆ ಡೌನ್ಲೋಡ್ ಮಾಡುವುದು?
- ನಿಮ್ಮ ಹೊಲದ ಪಹಣಿ(Pahani RTC)ಯನ್ನು ನಿಮ್ಮ ಮೊಬೈಲ್ ನಲ್ಲಿ ತೆಗೆಯಲು ನೀವು ಮೊದಲು ಭಾರತ ಸರ್ಕಾರ ನಿರ್ಮಿಸಿದತ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅಥವಾ ನಾವು ಈ ಕೆಳಗಡೆ ನೀಡಿರುವತ ಲಿಂಕ್ ನ ಮುಖಾಂತರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- https://rtc.karnataka.gov.in/Service78
- ನಂತರ ಈ ಮೇಲ್ಕಂಡ ವೆಬ್ಸೈಟ್ನಲ್ಲಿ ಲಾಗಿನ್ ಮಾಡಿಕೊಡು, ತನ್ನ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ , ನಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ , ನಂತರ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ. ನಂತರ ರೈತ ತನ್ನ ಸರ್ವೇ ನಂಬರ್ ಹಾಗೂ ಹಿಸ್ಸಾ ನಂಬರ್ ಮುಖಾಂತರ ತನ್ನ ಪಹಣಿಯನ್ನು ತನ್ನ ಮೊಬೈಲ್ ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಕೊಳ್ಳಬಹುದು.
ಮಾಹಿತಿ ಉಪಯೋಗ ಅನಿಸಿದ್ದಲ್ಲಿ ಈ ಲೇಖನವನ್ನು ತಪ್ಪದೇ ಶೇರ್ ಮಾಡಿ , ಹಾಗೂ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು