Crop relief:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ರೈತ(farmer)ರಿಗೆ ರಾಜ್ಯ ಸರ್ಕಾರ(State Govt) ಒಂದು ಸಿಹಿಸುದ್ದಿ ನೀಡಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿ(Crop damage)ಯಾದ ಕಾರಣ 39 ಲಕ್ಷ ರೈತರಿಗೆ ಸುಮಾರು 3535.30 ಕೋಟಿ ರೂ.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ ಎಂದು ಕಂದಾಯರಅದಂತ ಸಚಿವ ಕೃಷ್ಣ ಬೈರೇಗೌಡ(Krishna Byregowda) ತಿಳಿಸಿದರು. ಇದು ನಮ್ಮ ರಾಜ್ಯದ ರೈತರಿಗೆ ಸಂತಸದ ವಿಷಯವಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಈ ಹಣವು ವರದಾನವಾಗಲಿದೆ ಅಂತ ಹೇಳಬಹುದು.
Table of Contents
Crop relief | ಬೆಳೆ ಹಾನಿ

ಹೌದು ಸ್ನೇಹಿತರೆ ನಮ್ಮ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಪರವಾಗಿ ಕೇಶವಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿ (Crop damage)ಯಾದ 38,78,525 ರೈತರಿಗೆ 3535.30 ಕೋಟಿ ರು.ಗಳನ್ನು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಉಂಟಾದ ಬೆಳೆ ಹಾನಿಗೆ 4859 ರೈತರಿಗೆ 5.66 ಕೋಟಿ ರು.ಗಳನ್ನು ಪರಿಹಾರವನ್ನು ರೈತರಗಳ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಬೆಳೆಹಾನಿಗೆ ಪರಿಹಾರ ಪಡೆದ ರೈತರಿಗೆ ಬೆಳೆ ವಿಮೆ ಅಡಿ ಪರಿಹಾರವನ್ನು ನೀಡಬಾರದೆಂಬ ನಿಯಮವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿತ್ತು. ಈ ಬಗ್ಗೆ ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಗಮನಕ್ಕೆ ತರಲಾಯಿತು. ಈ ತಪ್ಪನ್ನು ಸರಿಪಡಿಸುವುದಾಗಿ ಅವರು ಭರವಸೆವನ್ನು ನೀಡಿದ್ದಾರೆ ಎಂದು ಕೃಷ್ಣ ಬೈರೇಗೌಡ್ರು ಅವರು ತಿಳಿಸಿದರು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು