ಅನ್ನ ಭಾಗ್ಯ ಯೋಜನೆ ಈ ತಿಂಗಳ ಹಣ ಜಮಾ ಆಗಿದೆಯಾ & ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ? ಜಸ್ಟ್ ಒಂದು ಕ್ಲಿಕ್ ನಲ್ಲಿ ಚೆಕ್ ಮಾಡಿ.! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್!

Spread the love
WhatsApp Group Join Now
Telegram Group Join Now

anna bhagya scheme status check:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ರಾಜ್ಯ ಸರ್ಕಾರ (State Govt)ವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ತಿಂಗಳು ಅಕ್ಕಿ ಅನ್ನು ಉಚಿತವಾಗಿ ನೀಡಲು ಅನ್ನಭಾಗ್ಯ ಯೋಜನೆ(Anna Bhagya Scheme) ಎಂಬ ಮಹತ್ವದತ ಯೋಜನೆಯನ್ನು ಜಾರಿಗೆ ತಂದಿರೋದು ನಿಮಗೆ ಗೊತ್ತಿದೆ. ಇದರ ಅಡಿಯಲ್ಲಿ ಉಚಿತವಾಗಿ ದವಸ ಧಾನ್ಯಗಳನ್ನು ಕಾಳು ಕಡಿಯನ್ನು ಸಹ ನೀಡಲಾಗುತ್ತದೆ.

ಮುಂಚೆ ಈ ಯೋಜನೆ ಅಡಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ಇದನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ತಲಾ 10 ಕೆಜಿ ಮಾಡಿದ್ದು, ಈಗ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ 34 ರೂಪಾಯಿ ಹಣವನ್ನು ಸಹ ನೀಡುತ್ತಿದೆ

ಇದೀಗ ನೀವು ನಿಮ್ಮ ಅನ್ನ ಭಾಗ್ಯ ಯೋಜನೆಯ ಹಣ (annabhagya hana) ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಮೊಬೈಲ್ ನಲ್ಲಿ ತುಂಬಾ ಸುಲಭವಾಗಿ ಚೆಕ್ ಮಾಡಬಹುದು. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ

anna bhagya scheme status check | ಅನ್ನಭಾಗ್ಯ ಹಣ ಚೆಕ್ ಮಾಡುವ ವಿಧಾನ:

anna bhagya scheme status check: ಅನ್ನ ಭಾಗ್ಯ ಯೋಜನೆ ಈ ತಿಂಗಳ ಹಣ ಜಮಾ ಆಗಿದೆಯಾ & ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ? ಜಸ್ಟ್ ಒಂದು ಕ್ಲಿಕ್ ನಲ್ಲಿ ಚೆಕ್ ಮಾಡಿ.! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್! 2024 FREE
  • ಹಂತ -1) ಮೊದಲು ನೀವು ಕೆಳಗೆ ನೀಡಲಾಗಿರುವ ರಾಜ್ಯ ಸರ್ಕಾರದ ಅಧಿಕೃತ ಆ್ಯಪ್ ಆದ ನಮ್ಮ DBT KARNATAKA ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು ಗೂಗಲ್ ಪ್ಲೇಸ್ಟೋರಿಂದ ಇನ್ಸ್ಟಾಲ್ ಮಾಡಿಕೊಳ್ಳಿ ಅಥವಾ ನಿಮ್ಮ ಪ್ಲೇ ಸ್ಟೋರ್ ಗೆ ಹೋಗಿ ಸರ್ಚ್ ಮಾಡಿ ಡೌನ್ಲೋಡ್ ಮಾಡಿ.
  • ಇಲ್ಲಿ ಕ್ಲಿಕ್ ಮಾಡಿ
  • ಹಂತ -2) ನಂತರ ನಿಮ್ಮ ಹೆಸರು ಮತ್ತು ಆಧಾರ್ ನಂಬರ್ ಹಾಕಿ ನಂತರ ಆಧಾರ ಕಾರ್ಡಿಗೆ ಲಿಂಕ್ ಇರುವಂತ ನಂಬರ್ ಗೆ OTP ಬರುತ್ತದೆ. ಅದನ್ನು ಹಾಕಿ ಲಾಗಿನ್ ಆಗಿ.
  • ಹಂತ -3)ನಂತರ ಹೋಮ್ ಪೇಜ್ ಕಾಣುತ್ತದೆ. ಅಲ್ಲಿ ನೀವು Payment Status ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ -4) ನಂತರ ಗೃಹ ಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ (annabhagya) ಎಂಬ ಎರಡು ಆಯ್ಕೆ ಕಾಣುತ್ತವೆ ಮತ್ತು ನೀವು ಪೆನ್ಷನ್ ಪಡೆಯುತ್ತದೆ ಅದು ಕೂಡ ನಿಮಗೆ ಕಾಣುತ್ತೆ. ನೀವು ಅನ್ನಭಾಗ್ಯ ಯೋಜನೆ (annabhagya) ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ -5) ನಂತರ ಅಲ್ಲಿ ನಿಮಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ ಮತ್ತು ಯಾವ ಯಾವ ತಿಂಗಳ ಹಣ ಜಮಾ ಆಗಿದೆ ಎಂಬುದರ ಸಂಪೂರ್ಣ ಮಾಹಿತಿ ಸಿಗುತ್ತದೆ.

ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ತುಂಬ ಸುಲಭವಾಗಿ ನಿಮ್ಮ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment